ಸಂಘದ ಸದಸ್ಯರು ಈ ಕೆಳಗಿನ ಉದ್ದೇಶಗಳನ್ನು ಹೊಂದಿರುತ್ತಾರೆ
(1) ಕನ್ನಡ ಬಾಷೆಯ ಉತ್ತೇಜನಕ್ಕೆ ಶ್ರಮಿಸುವುದು. ನಾಡು, ನುಡಿ, ನೆಲ. ಜಲ, ಗಡಿಯ ರಕ್ಷಣೆಗೆ ಸದಾ ಬದ್ಧರಾಗಿರುವುದು.(2) ಸಂಘದ ಸದಸ್ಯತ್ವ ಹೊಂದಿದ ಸಾಹಿತಿಗಳ ಬರವಣಿಗೆಗೆ ಉತ್ತೇಜನ ನೀಡುವುದು. ಪುಸ್ತಕಗಳನ್ನು ಪ್ರಕಾಶಿಸುವ, ಮುದ್ರಿಸುವ, ಬಿಡುಗಡೆಗೊಳಿಸುವ ಕಾರ್ಯವನ್ನು ಮಾಡುವುದು.
(3) ಸಂಘದ ಸದಸ್ಯತ್ವ ಹೊಂದಿದ ಉದಯೋನ್ಮಖ ಸಾಹಿತಿಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ, ಪುರಸ್ಕಾರಗಳನ್ನು ನೀಡುವುದು. ಕನ್ನಡ ಏಳ್ಗೆಗೆ ಅಗತ್ಯವಾದ ಬಾಷಾಭಿವೃದ್ಧಿಗೆ ಹಾಗೂ ಸಾಹಿತಿಗಳ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯ ತರಬೇತಿಗಳು, ಸ್ಪರ್ದೆಗಳು, ಚರ್ಚೆಗಳು, ಕಾರ್ಯಾಗಾರಗಳು ಇನ್ನಿತರೆ ಅಗತ್ಯ ಚಟುವಟಿಕೆಗಳನ್ನು ಏರ್ಪಡಿಸುವುದು.
(4) ಸಮಾಜ ಮುಖಿ ಸಮಾಜದ ನಿರ್ಮಾಣದಲ್ಲಿ ತೊಡಗುವುದು. ಸಮಾನತೆ, ಐಕ್ಯತೆ ಅಂಶಗಳನ್ನು ಬೆಳೆಸುವುದು.
(5) ಕನ್ನಡ ಸಾಹಿತಿಗಳ ವಸತಿ, ಆರೋಗ್ಯ, ಕ್ಷೇಮಾಭಿವೃದ್ಧಿಗೆ ಸರ್ಕಾರದ ಗಮನ ಸೆಳೆಯುವುದು.
(6) ಸಾಹಿತ್ಯದ ಬೆಳವಣಿಗೆಗೆ ಅಗತ್ಯ ಪೂರಕವೆನಿಸುವ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು.
(7) ಸಂಘದ ವತಿಯಿಂದ ನಿಯತಕಾಲಿಕ ಪತ್ರಿಕೆಗಳನ್ನು ಪ್ರಕಟಿಸುವುದು.
(8) ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲ ತೆರೆಯುವುದು.
(9) ಕನ್ನಡ ಅಧ್ಯಯನ ಕೇಂದ್ರಗಳನ್ನು ತೆರೆಯುವುದು.
(10) ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು.
(11) ಸಾರ್ವಜನಿಕರಿಂದ ಹಾಗೂ ಸರ್ಕಾರದಿಂದ ಹಾಗೂ ಸಂಘ ಸಂಸ್ಥೆಗಳಿಂದ ದೇಣಿಗೆ ಪಡೆಯುವುದು.
(12) ಸಮಾಜದಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವುದು, ಉಪನ್ಯಾಸ ನೀಡುವುದು, ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಮುಂತಾದ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸುವುದು.
(13) ಸಂಘದ ಸದಸ್ಯ ಸಾಹಿತಿಗಳ ಕವಿತೆಗಳನ್ನು ಗಾಯನ ಮಾಡಿಸಿ ಬಿಡುಗಡೆಗೊಳಿಸುವುದು.
(14) ಸಂಘದ ಸದಸ್ಯ ಸಾಹಿತಿಗಳು ಸ್ವಂತ ಹಣ ವಿನಿಯೋಗಿಸಿ ಮುದ್ರಿಸಿದ ಪುಸ್ತಕಗಳಿಗೆ ಸಬ್ಸಿಡಿ, ಪ್ರೋತ್ಸಾಹಧನ ನೀಡುವುದು. ಹಾಗೂ ಸರ್ಕಾರದಿಂದ ಹೆಚ್ಚಿನ ನೆರವನ್ನು ದೊರೆಯುವಂತೆ ಸಹಕರಿಸುವುದು.
(15) ನಾಡಿನಾದ್ಯಂತ ಶಾಖೆಗಳನ್ನು ತೆರೆಯುವುದು. ಶಾಖಾ ಮುಖ್ಯಸ್ತರನ್ನು ನೇಮಿಸುವುದು.
(16) ಪ್ರತಿ ಜಿಲ್ಲೆಗೆ ಒಬ್ಬರು ಜಿಲ್ಲಾ ಮುಖ್ಯಸ್ಥರನ್ನು ನೀಮಿಸುವುದು.
(17) ಗಡಿನಾಡು ಕನ್ನಡಿಗರ ಸಹಕಾರದೊಂದಿಗೆ ಗಡಿನಾಡುಗಳಲ್ಲಿ ಕನ್ನಡ ಅಭಿವೃದ್ಧಿಗೆ ಶ್ರಮಿಸುವುದು.
(18) ಇನ್ನಿತರೇ ಕನ್ನಡ ಸಾಹಿತ್ಯ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳು.
(19) ಸಂಘದ ಸದಸ್ಯ ಸಾಹಿತಿಗಳಿಗಾಗಿ ನಿವೇಶನ, ಮನೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.
(20) ಸಂಘದ ಶಾಖೆಗಳನ್ನು ನಾಡಿನ ಉದ್ದಗಲಕ್ಕೂ ತೆರೆಯುವುದು. ಹಾಗೂ ಶಾಖೆಯ ಅಧ್ಯಕ್ಷರನ್ನು ನೇಮಿಸುವುದು.
ಸಂಘದ ವಿವೇಚನಾತ್ಮಕ ಉದ್ದೇಶಗಳು:
(1) ದಾನಿಗಳಿಗೆ ಸನ್ಮಾನಿಸುವುದು.(2) ಕನ್ನಡ ಮಾದ್ಯಮದಲ್ಲಿ ಉತ್ತಮ ಸಾಧನೆಗೈದ ಸಾದಕರನ್ನು ಪ್ರೊತ್ಸಾಹಿಸುವುದು.
(3) ಅರಣ್ಯ ಬೆಳೆಸುವುದು, ವನಮಹೋತ್ಸವ ಕಾರ್ಯಕ್ರಮಗಳನ್ನು ನಡೆಸುವುದು.
(4) ಸಂಘದ ಸದಸ್ಯ ಸಾಹಿತಿಗಳಿಗೆ ಅವರು ರಚಿಸಿದ ಕೃತಿಗಳಿಗೆ ಉತ್ತಮ ರಾಜಧನ ದೊರೆಯುವಂತೆ ಶ್ರಮಿಸುವುದು.
(5) ಸಂಘದ ಸದಸ್ಯ ಸಾಹಿತಿಗಳಿಗೆ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸುವುದು. ಹಾಗೂ ಅವರಿಗೂ ಹಾಗೂ ಅವರ ಕುಟುಂಬಕ್ಕೆ ವೈದ್ಯಕೀರ/ಆರೋಗ್ಯ ವಿಮೆ ಮಾಡಿಸುವುದು.
(6) ಪ್ರಾಕೃತಿಕ ಅನಾಹುತಗಳು ಸಂಬವಿಸಿದಾಗ ಪರಿಹಾರ ಕ್ರಮ ಕೈಗೊಂಡು ದೇಶಕ್ಕೆ ಸಹಕರಿಸುವುದು.
(7) ಸರ್ಕಾರದಿಂದ ಭೂ ಮಂಜೂರಾತಿ ಮಾಡಿಸಿಕೊಂಡು ಕಛೇರಿಯನ್ನು ನಿರ್ಮಿಸಲು ಸಹಾಧನ ಕೋರುವುದು.
(8) ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದು.
(9) ವಿದ್ಯಾರ್ಥಿಗಳಿಗೆ ಸಾಹಿತ್ಯ ಕ್ಷೇತ್ರಕ್ಕೆ ಪ್ರೋತ್ಸಾಹಿಸೋದು.
(10) ಇನ್ನಿತರೆ ಸಾಹಿತ್ಯ ಸಾಂಕ್ಕøತಿಕ ಚುಟುವಟಿಕೆಗಳು ಸಂಘದ ನಿರ್ದೇಶಕ ಮಂಡಳಿಯಲ್ಲಿ ಅನುಮೋದಿತವಾದವುಗಳು.